
ವೆಂಕಟರಮಣೇಗೌಡ
‘ಮಂಡ್ಯದ ಜನರ ಬದುಕಿಗೆ ಕಬ್ಬಿಗಿಂತ ಒಳ್ಳೆ ಹೋಲಿಕೆ ಇಲ್ಲ. ಮೈಯನೇ ಹಿಂಡಿ ನೋವುಂಡರೂ ಸಿಹಿಯನ್ನೇ ಕೊಡುವ ಮುಗ್ಧ ಜನ ಅವರು. ಅವರ ಬದುಕನ್ನ ಸಕ್ಕರೆಯಾಗಿಸಬೇಕು ಅನ್ನುವುದು ನನ್ನ ಕನಸು.’

ಮಂಡ್ಯದ ಅಸ್ಮಿತೆ
ಚಾರಿತ್ರಿಕವಾಗಿ ಮಂಡ್ಯಕ್ಕೆ ಬಹಳ ಮಹತ್ತರ ಸ್ಥಾನವಿದೆ. ಶಿವಪುರದ ಸತ್ಯಾಗ್ರಹ ಈ ನೆಲದ ಅಂತಃಶಕ್ತಿಯ, ದೇಶಾಭಿಮಾನದ ಪ್ರತೀಕ. ಕನ್ನಡ, ಕರುನಾಡಿನ ಪ್ರಶ್ನೆ ಎದುರಾದರೆ, ದಂಡಿನ ಗುಂಡಿಗೆ ಗುಂಡಿಗೆಯೊಡ್ಡುವ ಸಾಹಸಿಗಳ ನಾಡು ನಮ್ಮದು. ಕಬ್ಬಿನಂತೆ ಹೊರಮೈಯಲ್ಲಿ ಗಟ್ಟಿಯಿದ್ದರೂ, ಗೆಳೆತನ ಬೆಳೆಸಿದರೆ, ಕರಗಿ ಸಿಹಿ ನೀಡುವ ಜನರು ಇಲ್ಲಿನವರು. ಅನಾದಿ ಕಾಲದಿಂದ, ಸರ್ವಜನಾಂಗದ ಶಾಂತಿಯ ತೋಟವಾಗಿ ನಳನಳಿಸಿರುವ ನಾಡು ಈ ಮಂಡ್ಯ.
ಮಂಡ್ಯದ ಬದುಕು
ಕಣ್ಣುಹರಿಸಿದಷ್ಟೂ ನಳನಳಿಸುವ ಕಬ್ಬಿನ ಬೆಳೆ, ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಗಳು, ಹಬ್ಬ-ಹರಿದಿನಗಳನ್ನಾಚರಿಸುವ ಇಲ್ಲಿನ ನಿರ್ಮಲ ಮನಸ್ಸಿನ ಮಂದಿ ಮಂಡ್ಯದ ಬದುಕಿನ, ಜೀವನಪ್ರೀತಿಯ ದ್ಯೋತಕ. ಇತ್ತೀಚಿನ ದಿನಗಳಲ್ಲಿ, ನೆರೆಗೆ, ಬರಕ್ಕೆ ನಲುಗುತ್ತಿದೆ ಈ ಪ್ರದೇಶ. ಇಲ್ಲಿನ ಮಕ್ಕಳ ಬದುಕು ದುಸ್ತರವಾಗುತ್ತಿದೆ. ಇಲ್ಲಿನ ಜನರ, ಜೀವನ ಕ್ರಮ ಉಳಿಸುವುದು, ಸಂಸ್ಕೃತಿ ಉಳಿಯುವುದು, ಕನ್ನಡನಾಡಿನ ಒಟ್ಟು ಅಭಿವೃದ್ಧಿಗೆ ಅಗತ್ಯ.
ವೆಂಕಟರಮಣೇಗೌಡ
ಇಂಥ ನಾಡಿನಲ್ಲಿ ಹುಟ್ಟಿ, ಸ್ವಂತ ಪರಿಶ‌್ರಮದಿಂದ ಯಶಸ್ವೀ ಉದ್ಯಮಿಯಾಗಿ ಬೆಳೆದ ವೆಂಕಣರಮಣೇ ಗೌಡರು ಸ್ಟಾರ್ ಚಂದ್ರು ಎಂದೇ ಹೆಸರಾದವರು. ಅವರ ಕಾರ್ಯಕ್ಷೇತ್ರ ಬೆಂಗಳೂರಿನವರೆಗೂ ಹಬ್ಬಿದರೂ ಹುಟ್ಟಿದೂರನ್ನು ಅವರು ಮರೆತಿಲ್ಲ. ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗಿರುವ ಗೌಡರು ಮೂಲತಃ ಹೃದಯವಂತರು. ಜನರ ಕಷ್ಟಕ್ಕೆ ಆಸರೆಯಾಗುವ ಅವಕಾಶ ಸಿಗುವುದು ತಮ್ಮ ಭಾಗ್ಯವೆಂದೇ ಭಾವಿಸುವ ಅವರಿಗೆ ಎಲ್ಲ ರೈತರ ಮಕ್ಕಳೂ ತಮ್ಮಂತೆ ಉದ್ಯಮಿಗಳಾಗಬೇಕು ಎಂಬ ದೊಡ್ಡ ಕನಸಿದೆ.
ಸೇವೆಯ ಆಗಸದಲ್ಲಿ ವೆಂಕಟರಮಣೇಗೌಡ
ಸ್ಟಾರ್ ಚಂದ್ರು ಎಂದೇ ಹೆಸರಾಗಿರುವ ಶ್ರೀ ವೆಂಕಟರಮಣೇ ಗೌಡರ ಊರು ಮಂಡ್ಯ. ನಾಗಮಂಗಲ ತಾಲೂಕಿನ ಕನ್ನಾಘಟ್ಟ ಎಂಬ ಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಚಂದ್ರು ಇಂದು ಯಶಸ್ವೀ ಉದ್ಯಮಿಯಾಗಿ ಬೆಳೆದಿದ್ದಾರೆ. ಸ್ಟಾರ್ ಇನ್ಫ್ರಾಟೆಕ್ ಎಂಬ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಸಾವಿರಾರು ಜನರು ಬದುಕು ಕಟ್ಟಿಕೊಳ್ಳಲು ಕಾರಣರಾಗಿದ್ದಾರೆ. ಅಷ್ಟೆಲ್ಲಾ ಬೆಳೆದಿದ್ದರೂ ತಮ್ಮ ಹಳ್ಳಿ ಬೇರುಗಳನ್ನು ಗೌಡರು ಮರೆತಿಲ್ಲ. ಮೊದಲಿನಿಂದಲೂ ಅನೇಕ ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಚಂದ್ರು ಅವರು ಅದನ್ನು ಕರ್ತವ್ಯವೆಂದು ಭಾವಿಸಿದವರೇ ಹೊರತು ಎಂದೂ ಪ್ರಚಾರ ಪಡೆಯುವ ಗೋಜಿಗೆ ಹೋದವರಲ್ಲ. ತಮ್ಮ ಹುಟ್ಟೂರಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ, ಗ್ರಂಥಾಲಯ ನಿರ್ಮಾಣದಂಥ ಅನೇಕ ಕೆಲಸಗಳಿಗೆ ಕೈಜೋಡಿಸಿರುವ ಸ್ಟಾರ್ ಚಂದ್ರು ಮೂಲಭೂತವಾಗಿ ಅಂತಃಕರಣವುಳ್ಳ ವ್ಯಕ್ತಿ. ಕರೋನಾ ಸಮಯದಲ್ಲಿ ಅವರು ಕೈಗೊಂಡ ದಾಸೋಹಗಳು ಹಾಗೂ ತಮ್ಮ ಸಂಸ್ಥೆಯ ಕಾರ್ಮಿಕರ ಸಂಸಾರದ ಭಾರವನ್ನು ಹೊತ್ತ ರೀತಿ ಅನನ್ಯವಾದದ್ದು. ಪ್ರತಿಯೊಬ್ಬ ರೈತನ ಮಗನೂ ತಮ್ಮಂತೆ ಉದ್ಯಮಿಯಾಗಬೇಕೆಂಬ ಕನಸು ಹೊತ್ತಿರುವ ವೆಂಕಣರಮಣೇಗೌಡರು (ಸ್ಟಾರ್ ಚಂದ್ರು) ಅದಕ್ಕಾಗಿ ಅನೇಕ ಕಾರ್ಯಾಗಾರ, ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದಾರೆ. ಭವಿಷ್ಯದಲ್ಲಿ ಜನರ ಉದ್ಧಾರಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕೆಂಬುದು ವೆಂಕಟರಮಣೇ ಗೌಡರ ಕನಸಾಗಿದೆ.

ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಅವರ ವ್ಯಕ್ತಿ ಚಿತ್ರಣವನ್ನು ಇಲ್ಲಿ ಡೌನ್ಲೋಡ್ ಮಾಡಿ.

ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಅವರ ಭಾವಚಿತ್ರಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಭರ್ಜರಿ ರೋಡ್ ಶೋ
ಅಚ್ಚರಿಯ ಬೆಳವಣಿಗೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರ ನಡೆಸಿದರು.

ಕಾಂಗ್ರೆಸ್ ಬೆಂಬಲಕ್ಕೆ ಸಿಪಿಐ(ಎಂ)
ಮಂಡ್ಯ: ಕೋಮುವಾದಿ ಬಿಜೆಪಿ ಮತ್ತು ಅವಕಾಶವಾದಿ ಜೆಡಿಎಸ್ ಸೋಲಿಸಲು ಜನಪರ ಪರ್ಯಾಯ ಜಾತ್ಯಾತೀತ ನೀತಿಗಳ ಹೊಸ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೃಷ್ಣಗೌಡ ತಿಳಿಸಿದರು.

ಮಂಡ್ಯ ಜಿಲ್ಲೆ ಜನರ ಸೇವೆಯೇ ನನ್ನ ಧೈಯ
ನನಗೆ ರಾಜಕೀಯ ಹೊಸದಲ್ಲ. ಈವರೆಗೆ ತೆರೆಯ ಹಿಂದೆ ನಿಂತು ಮಾಡುತ್ತಿದ್ದೆ, ಹುಟ್ಟಿದಾಗಿನಿಂದಲೂ ರಾಜಕಾರಣವನ್ನು ನೋಡಿಕೊಂಡು ಬೆಳೆದಿದ್ದೇನೆ. ಉದ್ಯಮಿಯಾಗಿ ಎಲ್ಲ ರಾಜಕಾರಣಿಗಳ ಸಖ್ಯ ಹೊಂದಿದ್ದೇನೆ. ಈಗ ಲೋಕಸಭೆ ಚುನಾವಣೆ ಮೂಲಕ ನೇರ ಅಖಾಡಕ್ಕೆ ಇಳಿದಿದ್ದೇನೆ. ಹಾಗೆಯೇ ನಾನು ವಲಸಿಗನಲ್ಲ, ಮಂಡ್ಯ ನನ್ನ ಜನ್ಮಭೂಮಿ. ಉದ್ಯಮಿಯಾಗಿ ಬೆಂಗಳೂರಿನಲ್ಲಿ ನೆಲೆ ನಿಂತಿದ್ದರೂ ತವರಿನ ತುಡಿತ ಕಡಿಮೆಯಾಗಿಲ್ಲ. ನನ್ನ ಜನರ ಸೇವೆ ಮಾಡಲು ಸಕ್ರಿಯ ರಾಜಕಾರಣ ಪ್ರವೇಶಿಸಿದ್ದೇನೆ.

ಜಿಲ್ಲೆ ಅಭಿವೃದ್ಧಿಗೆ ಸ್ಟಾರ್ ಪಟ್ಟ ಕೊಡಿಸಲು ಶ್ರಮ
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾನೇರ ಫೈಟ್ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಕಣಕ್ಕಿಳಿದಿದ್ದಾರೆ. ಮಂಡ್ಯದ ಅಭಿವೃದ್ಧಿಗೆ ಯಾವ ಕನಸನ್ನು ಹೊತ್ತಿದ್ದಾರೆ, ಅವರ ಯೋಜನೆಗಳೇನು? ಎಂಬುದರ ಬಗ್ಗೆ ‘ಉದಯವಾಣಿ’ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಮಂಡ್ಯ- ಇಂಡಿಯಾ ಕೊಂಡಿಯಾಗುವೆ
ಉದ್ಯಮ ಕ್ಷೇತ್ರದಿಂದ ರಾಜಕಾರಣಕ್ಕೆ ಪದಾರ್ಪಣೆ ಮಾಡಿರುವ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು. ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಾದ್ಯಂತ ಸುತ್ತಾಡುತ್ತಿರುವ ಚಂದ್ರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ನನ್ನ ಗೆಲುವಲ್ಲಿ ಮಂಡ್ಯ ಗೆಲುವಿದೆ…
ದೇಶ, ರಾಜ್ಯದಲ್ಲೇ ಮಂಡ್ಯ ರಾಜಕಾರಣ ತುಸು ಭಿನ್ನವೇ ಸರಿ. . ಕ್ಷಿಪ್ರ ರಾಜಕೀಯಕ್ಕೆ, ಸದಾ ಜಿದ್ದಾಜಿದ್ದಿ ಹೋರಾಟಗಳಿಗೆ ಹೆಸರಾದ ಈ ನಾಡಿನಲ್ಲಿ ಚುನಾವಣೆ ಎಂಬುದು ಪ್ರತಿಷ್ಠೆಯ ವಿಷಯ. ಇಲ್ಲಿನ ಮತದಾರ ಪ್ರಭು ಅಚ್ಚರಿ ಫಲಿತಾಂಶ ನೀಡುವುದರಲ್ಲಿ ನಿಸ್ಸಿಮ. ಇದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾನೆ. ಅಂಥ ಅಪರೂಪದ ರಾಜಕೀಯ ಅಖಾಡದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.

ಕೇಂದ್ರದಿಂದ 1.85 ಲಕ್ಷ ಕೋಟಿ ರೂ. ತೆರಿಗೆ ವಂಚನೆ
ಕೇಂದ್ರಕ್ಕೆ ತೆರಿಗೆ ಹಣ ಸಂಗ್ರಹಿಸಿಕೊಡುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ತೆರಿಗೆ ಪಾಲಿನ ಹಣವನ್ನು ವಾಪಸ್ ಪಡೆಯುವಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಕರ್ನಾಟಕದ ಮೇಲೆ ಕೇಂದ್ರ ಕೆಂಗಣ್ಣು ಬೀರುತ್ತಲೇ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.

ಎನ್‌ಡಿಎಗೆ ಮತ ಹಾಕಿದರೆ ರಾಜ್ಯಕ್ಕೆ ದ್ರೋಹ ಬಗೆದಂತೆ: ಎನ್.ಚಲುವರಾಯಸ್ವಾಮಿ
ರಾಜ್ಯದ ತೆರಿಗೆ ಪಾಲಿನಲ್ಲಿ ವಂಚನೆ, ಬರದ ಬೇಗುದಿಯಲ್ಲಿ ನಲುಗುತ್ತಿರುವ ರೈತರು ಹಾಗೂ ಜನಸಾಮಾನ್ಯರಿಗೆ ನೆರವಾಗದ ಕೇಂದ್ರ ಸರ್ಕಾರದ ಧೋರಣೆ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಸಾಧ್ಯವಾಗದ ಎನ್ ಡಿ ಎ ನೇತೃತ್ವದ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಿದರೆ, ಅದು ರಾಜ್ಯಕ್ಕೆ ಬಗೆದ ದ್ರೋಹವಾಗಲಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದರು.

ರಾಜ್ಯದ ಪಾಲಿನ ತೆರಿಗೆ ಹಣ ನೀಡದ ಕೇಂದ್ರ ಸರ್ಕಾರ
ಕಳೆದ ಹತ್ತು ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಲ ಕಳೆಯುತ್ತಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ದೂರಿದರು.

ಪ್ರವಾಸಿ ಸ್ಥಳಗಳ ಅಭಿವೃದ್ಧಿ, ನೀರಾವರಿ ಯೋಜನೆಗೆ ಒತ್ತು: ಸ್ಟಾರ್ ಚಂದ್ರು
ಬೆಲೆ ಏರಿಕೆ ಮತ್ತು ನಿರುದ್ಯೋಗ ದೇಶದ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಕೃಷಿ ಆಧಾರಿತ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂಬ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.